ಒಂದೆರಡು ಬಂಡೆಗಳನ್ನು ದಾಟಿದಂತೆ ರಮೇಶ ಅವಳ ಸಮೀಪಕ್ಕೆ ಮತ್ತಷ್ಟು ಸರಿದು ರತ್ನಳನ್ನು ತನ್ನ ತೋಳಿನೊಳಗೆ ಸೆಳೆದುಕೊಂಡ. ನಡೆಯುತ್ತಿದ್ದ ರತ್ನ ತಟ್ಟನೆ ನಿಂತಳು.‘ರಮೇಶ, ನನ್ನನ್ನು ಪರೀಕ್ಷಿಸಬೇಡಿ. ನಿಮಿಷ ನಿಮಿಷಕ್ಕೂ ಹೀಗೆ ನನ್ನನ್ನು ಆಸೆಯ ಬಲೆಗೆ ಒಡ್ಡಬೇಡಿ. ನಾನೂ ಮನುಷ್ಯಳು, ದುರ್ಬಲಳು’ಮುಳುಗುತ್ತಿರುವ...